ಆಶಾ ಕುಮಾರಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ನಾಯಕಿ ಮತ್ತು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಮತ್ತು ಪಂಜಾಬ್‌ನ ಮಾಜಿ ಎಐಸಿಸಿ ಉಸ್ತುವಾರಿ ವಹಿಸಿದ್ದರು. ಅವರು ಡಾಲ್ಹೌಸಿಯಿಂದ ಹಿಮಾಚಲ ಪ್ರದೇಶ ವಿಧಾನಸಭೆಯ ಸದಸ್ಯರಾಗಿದ್ದರು.</> ಅವರು ೨೦೦೩ ರಿಂದ ೨೦೦೫ ರ ವರೆಗೆ ರಾಜ್ಯದ ಶಿಕ್ಷಣ ಸಚಿವರಾಗಿದ್ದರು. == ವೈಯಕ್ತಿಕ ಜೀವನ == ಅವರು ಚಂಬಾದ ರಾಜ ಲಕ್ಷ್ಮಣ ಸಿಂಗ್ ಅವರ ಮಗ ಬ್ರಿಜೇಂದ್ರ ಸಿಂಗ್ ಅವರನ್ನು ವಿವಾಹವಾದರು. == ವಿವಾದ == ೨೯ ಡಿಸೆಂಬರ್ ೨೦೧೭ ರಂದು ಆಶಾ ಕುಮಾರಿಯವರು ವಾದದ ಸಮಯದಲ್ಲಿ ಮಹಿಳಾ ಕಾನ್‌ಸ್ಟೆಬಲ್‌ ಒಬ್ಬರಿಗೆ ಕಪಾಳಮೋಕ್ಷ ಮಾಡಿ ವಿವಾದವನ್ನು ಹುಟ್ಟು ಹಾಕಿದರು. ನಂತರ ಆ ಕಾನ್‌ಸ್ಟೆಬಲ್ ತಿರುಗಿ ಆಶಾ ಕುಮಾರಿಯವರಿಗೆ ಕಪಾಳಮೋಕ್ಷ ಮಾಡಿದರು. ನಂತರ ಅವರು ತನ್ನ ತಪ್ಪಿಗೆ ಕ್ಷಮೆಯಾಚಿಸಿದರು. == ಉಲ್ಲೇಖಗಳು ==